Wednesday 9 July, 2008

ಸ್ವತಂತ್ರ ಭಾರತದ ನಾಣ್ಯಗಳು

ಮಹಾತ್ಮ ಗಾಂಧೀಜಿಯವರ ಮುಂದಾಳತ್ವದಲ್ಲಿ ಅಹಿಂಸಾ ಮಂತ್ರದ ಮೂಲಕ 1947ರಲ್ಲಿ ಭಾರತ ಬ್ರಿಟಿಷರಿಂದ ಸ್ವತಂತ್ರವಾಯಿತು. 1950ರಲ್ಲಿ ಸೌರ್ವಭೌಮ ಗಣರಾಜ್ಯವಾಗುವವರೆಗೆ ಭಾರತದಲ್ಲಿ ಬ್ರಿಟಿಷರು ಚಲಾವಣೆಗೆ ತಂದಿದ್ದ ನಾಣ್ಯಗಳನ್ನು ಮುಂದುವರಿಸಲಾಯಿತು. ಭಾರತ 1950ನೇ ಆಗಸ್ಟ 15ರಂದು ಮೂರನೆ ಸ್ವಾತಂತ್ರೋತ್ಸವದಂದು ತನ್ನದೇ ಆದ ನಾಣ್ಯಗಳನ್ನು ಮುದ್ರಿಸಿ ಬಿಡುಗಡೆಗೊಳಿಸಿತು. ಈ ನಾಣ್ಯಗಳನ್ನು ಬ್ರಿಟಿಷರು ಜಾರಿಗೊಳಿಸಿದ್ದ ಬೆಲೆ, ಅಳತೆ, ಧಾತು ಮತ್ತು ರಚನೆಯ ಆಧಾರದ ಮೇಲೆ ಮುದ್ರಿಸಲಾಗಿತ್ತು, ಆಕಾರದಲ್ಲಿ ಮಾತ್ರ ಪೂರ್ಣ ಬದಲಾವಣೆಗೊಂಡವು.
ಒಂದು ಪೈಸೆಯಿಂದ ಒಂದು ರೂಪಾಯಿ ಮೌಲ್ಯದವರೆಗೆ ಬ್ರಿಟಿಷ ನಾಣ್ಯಗಳಿದ್ದ ರಾಜರ ಭಾವಚಿತ್ರವನ್ನು ಬದಲಾಯಿಸಿ ಸಾರನಾಥದಲ್ಲಿರುವ ಅಶೋಕ ಸ್ಥಂಭವನ್ನು ಅಳವಡಿಸಲಾಯಿತು. ಈ ಗುರುತು ಅಹಿಂಸೆ, ಶಾಂತಿ ಹಾಗೂ ಚಲನೆಯ ಪ್ರತೀಕವಾಗಿ ಭಾರತದ ಲಾಂಚನವಾಯಿತು.



ಭಾರತ ಸ್ವಾತಂತ್ರ್ಯದ ಮೇಲೆ ಕ್ವಾಟ್ರನೇರಿ ಪಧ್ಧತಿಯಲ್ಲಿ ತೊಂದರೆಯನ್ನು ಮನಗಂಡು ಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಮೊದಲನೆಯ ವ್ಯವಸ್ಥೆಯಲ್ಲಿ 1 ರೂಪಾಯಿಗೆ 64 ಪೈಸೆ ಮೊತ್ತವಾಗಿತ್ತು. ಆದರೆ ಮೆಟ್ರಿಕ್ ಪದ್ಧತಿಯಲ್ಲಿ 1ರೂಪಾಯಿಗೆ 1೦೦ ಪೈಸೆಯ ಮೊತ್ತಕ್ಕೆ ಸಮಾನವಾಗಿತ್ತು.ನಂತರ ಭಾರತ ಸರ್ಕಾರವು ವಿವಿಧ ಲೋಹ ಮತ್ತು ವಿವಿಧ ಆಕೃತಿಯ ನಾಣ್ಯಗಳನ್ನು ಟಂಕಿಸಲು ಪ್ರಾರಂಭಿಸಿತು.

ಭಾರತವು ನಾಲ್ಕು ಟಂಕಸಾಲೆಗಳನ್ನು ಹೊಂದಿದ್ದು ಅವುಗಳು.


1) ಕೊಲ್ಕತ್ತಾ


2) ಮುಂಬಯಿ


3) ನೋಯ್ಡಾ


4) ಹೈದರಾಬಾದ

Thursday 26 June, 2008

ನಾಣ್ಯಗಳ ಇತಿಹಾಸ ಮತ್ತು ಉಗಮ

ನಾಣ್ಯಗಳ ಇತಿಹಾಸ ಮತ್ತು ಉಗಮ :-
ನಾಣ್ಯಗಳು ಎಲ್ಲರಿಗೂಬೇಕಾದ ಹಾಗೂಪ್ರಿಯವಾದ ವಸ್ತುಗಳು ಅವು ಸರ್ವ ವ್ಯಾಪಿಯಾದವು. ಪ್ರಪಂಚದ ಯಾವ ಮೂಲೆಗೆ ಹೋದರು, ಅಲ್ಲಿ ಅವರದೇ ಆದ ನಾಣ್ಯಗಳಿರುತ್ತವೆ. ನಾಣ್ಯಗಳಿಲ್ಲದೆ ಇರುವ ಪ್ರಪಂಚವನ್ನು ಉಹಿಸುವದು ಕಷ್ಟವೆನಿಸುತ್ತದೆ.
ಭಾರತದಲ್ಲಿ ನಾಣ್ಯಗಳ ಪ್ರಾರಂಭದ ಬಗ್ಗೆ ಖಚಿತ ಮಾಹಿತಿ ನೀಡಲು ಅಸಾಧ್ಯವಾದರೂ, ವೇದಗಳಲ್ಲಿ ನಿಷ್ಕ ಕಾರ್ಷಪಣ ನಾಣ್ಯಗಳ ಬಳಕೆಯ ಬಗ್ಗೆ ಉಲ್ಲೇಖವಿದೆ. ಹಣ ಅಥವಾ ದುಡ್ಡು ಹೇಗೆ ಹುಟ್ಟಿತು ಗೊತ್ತೇ? ಆದಿ ಮಾನವ ತನ್ನ ಅಲೆಮಾರಿ ಜೀವನವನ್ನು ಮುಗಿಸಿ ಸ್ಥಿರ ಜೀವನವನ್ನು ಪ್ರಾರಂಭಿಸಿದಾಗ ಅವನಿಗೆ ಹಣದ ಅರಿವಾಗಲಿ, ಅಗತ್ಯವಾಗಲಿ ಇರಲಿಲ್ಲ ಹಾಗು ಅದರ ಅರಿವಿರಲಿಲ್ಲ ಅದರ ಅಗತ್ಯಗಳು ಕಡಿಮೆಯಾಗಿದ್ದು ತಮಗೆ ಬೇಕಾದ ವಸ್ತುಗಳನ್ನು ತಾವೇ ತಯಾರಿಸಿಕೊಳ್ಳುತ್ತಿದ್ದರು ತಮ್ಮಲ್ಲಿ ಇಲ್ಲದ ಅಗತ್ಯ ವಸ್ತುಗಳನ್ನು ಬೇರೆ ಗುಂಪುಗಳಿಂದ ಪಡೆದು ತಮ್ಮ ವಸ್ತುಗಳನ್ನು ಅವರಿಗೆ ನೀಡಿ ಸರಳ ಜೀವನ ನಡೆಸುತ್ತಿದ್ದರು ಈ ವ್ಯವಸ್ಥೆಗೆ ವಸ್ತುವಿನಿಮಯ ಎನ್ನುತ್ತಾರೆ.

ಗೋವುಗಳು ಹಾಗು ವಸ್ತು ವಿನಿಮಯ

ಪ್ರಾಚಿನ ಕಾಲದಲ್ಲಿ ಸಂಪತ್ತಾಗಿ ಪರಿಗಣಿಸಿದ ಗೋವು ಮತ್ತು ಎತ್ತುಗಳು ಕಾಲಕ್ರಮೇಣ ವಸ್ತುವಿನಿಮಯದಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂದವು. ಕಾರಣವೇನೆಂದರೆ, ಇವುಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಇವುಗಳ ಸಾಗಾಣಿಕೆ ಕಷ್ಟವಾಗಿದ್ದರಿಂದ ಜನರು ಇವುಗಳನ್ನು ನಾಣ್ಯದ ರೂಪದಲ್ಲಿ ಬಳಸಲು ನಿರಾಕರಿಸಿದರು. ನಂತರ ಸಮುದ್ರದಲ್ಲಿ ದೊರೆಯುತ್ತಿದ್ದ ಕಪ್ಪೆ ಚಿಪ್ಪು, ಕವಡೆಗಳನ್ನು ವಸ್ತು ನಾಣ್ಯವಾಗಿ ಬಳಸುತ್ತಿದ್ದರು. ಇವುಗಳನ್ನು ಮನೋರಂಜನೆಗಾಗಿಯು ಸಹ ಬಳಸುತ್ತಿದ್ದರು.

ನಾಣ್ಯಗಳ ಪ್ರಾಮುಖ್ಯತೆ ಮತ್ತು ಕುತುಹಲತೆ
ಹಣ(ನಾಣ್ಯ) ಮಾನವನ ಅನಿವಾರ್ಯ ಹಾಗು ಅವಿಭಾಜ್ಯ ಅಂಗ ಮತ್ತು ಅವನ ಎಲ್ಲ ಆಸೆ, ಆಕಾಂಕ್ಷೆ ಮತ್ತು ಅವಶ್ಯಕತೆಗಳನ್ನು ಪೂರೈಸುವ ಸಾಧನ. ಇದು ಆಂತರಿಕ ಮತ್ತು ಹೊರದೇಶದ ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಪ್ರಮುಖ ಪಾತ್ರವಹಿಸುವ ಮಾಧ್ಯಮ. ನಾಣ್ಯ ಲೋಹದ ಆಧಾರದ ಮೇಲೆ ಅಂದಿನ ಆರ್ಥಿಕ ವ್ಯವಸ್ಥೆಯನ್ನು ಗುರುತಿಸಬಹುದು. ನಾಣ್ಯಗಳ ಮೇಲೆ ಮುದ್ರಿಸಿರುವ ಸಸ್ಯ, ಪ್ರಾಣಿ ಹಾಗು ಇತರೆ ಬರವಣಿಗೆ ಮತ್ತು ಸಂಕೇತಗಳು ಮಾನವ ಅವುಗಳೊಂದಿಗೆ ಸಂಪರ್ಕ ಮತ್ತು ಸಂಧರ್ಭವನ್ನು ಸೂಚಿಸುತ್ತದೆ. ಅಲ್ಲದೆ ಪ್ರಾಚಿನ ಕಾಲದ ಅರ್ಥಿಕ, ಸಾಮಾಜಿಕ ಮತ್ತು ವಾಣಿಜ್ಯ ವ್ಯವಸ್ಥೆಯನ್ನು ತಿಳಿಯಲು ಹಾಗೂ ಅಂದಿನ ಇತಿಹಾಸ ರಚನೆಗೂ ಸಹಕಾರಿಯಾಗಿವೆ.